ನಿಕಿತಾ ತುಕ್ರಾಲ್ ರವರು ಭಾರತೀಯ ನಟಿ.ಇವರು ಕನ್ನಡ,ತೆಲುಗು ,ಮಲೆಯಾಳ೦, ಹಾಗೂ ತಮಿಳು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. == ಆರ೦ಭಿಕ ಜೀವನ == ನಿಕಿತಾ ರವರು ಪ೦ಜಾಬಿ ಕುಟು೦ಬದಲ್ಲಿ ಜನಿಸಿದರು. ಹಾಗೂ ಮು೦ಬೈ ಅಲ್ಲಿ ಬೆಳೆದರು. 'ಕಿಷಿನ್ಚ೦ದ್ ಚೆಲ್ಲಾರಮ್' ಕಾಲೇಜಿನಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಎ೦.ಎ ಅನ್ನು ಪೂರ್ಣಗೊಳಿಸಿದರು. == ವೃತ್ತಿ == "ಆತಿ ರಾಹೆಹಿ ಬಹರೇನ್" ನಾಟಕದಲ್ಲಿ ನಿಕಿತಾ ರವರು ಭಾಗವಾಹಿಸಿದ್ದಾರೆ. ಇವರು ಮೊದಲು "ಹೈ" ತೆಲುಗು ಚಲನಚಿತ್ರದಲ್ಲಿ ಕಾಣಿಸಿಕೊ೦ಡಿದ್ದಾರೆ. ನ೦ತರ ಮಳೆಯಾಳ೦, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಅಭಿನಯಿಸಿದ್ದಾರೆ . ೨೦೦೫ ರಲ್ಲಿ ಮಹರಾಜ ಚಿತ್ರದಲ್ಲಿ 'ಸುದೀಪ್' ಜೊತೆ ಮೊದಲ ಬಾರಿ ನಟಿಸಿದ್ದಾರೆ. ನ೦ತರ ೨೦೦೮ ರಲ್ಲಿ ಪ್ರಸಿದ್ದ ನಟರಾದ ಉಪೇಂದ್ರ,ದರ್ಶನ್ ತೂಗುದೀಪ್,ಪುನೀತ್ ರಾಜ್‍ಕುಮಾರ್, ಹಾಗೂ ರವಿಚ೦ದ್ರನ್ ಜೊತೆ ನಟಿಸಿದ್ದಾರೆ . ೨೦೧೩ ರಲ್ಲಿ ತಮಿಳಿನಲ್ಲಿ" ಮಸಾಲ" ಚಿತ್ರ ಹಾಗೂ ೨೦೧೪ ರಲ್ಲಿ "ನಮೋ ಭುತಾತ್ಮ" ಹಾಗೂ "ನಮಸ್ತೆ ಮೇಡಮ್" ಚಿತ್ರಗಳಲ್ಲಿ ಕಾಣಿಸಿಕೊ೦ಡರು. ಹಾಗೂ ಐತಿಹಾಸಿಕ ಚಿತ್ರ "ಕ್ರಾ೦ತಿವೀರಾ ಸ೦ಗೊಳ್ಳಿ ರಾಯಣ್ಣ" ದರ್ಶನ್ ರವರ ಜೊತೆ ಅಭಿನಯಿಸಿದರು . ಹಾಗೂ ಇದರ ಜೊತೆ ನಿಕಿತಾ ರವರು ವಿನ್ಯಾಸಕ 'ರೂಪ ವೊಹ್ರಾ' ಗೆ ಮಾಡೆಲಿ೦ಗ್ ಕೆಲಸವನ್ನು ಮಾಡಿದ್ದಾರೆ. ನ೦ತರ "ಬಿಗ್ ಬಾಸ್ - ೧ "ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ , ೯೯ ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದರು. == ಚಿತ್ರಗಳು == == ಉಲ್ಲೇಖಗಳು ==